Tuesday, 13 January 2009

Operation mosaru successful

This blog is specially for people who can read Kannada script. Please excuse me.

ಅಮೆರಿಕದಲ್ಲಿ ಇದ್ದಾಗ ಎರಡು ಮೂರು ಬಾರಿ ಪ್ರಯತ್ನ ಪಟ್ಟಿದ್ದೆ. ಆದರೂ ಆ ಪ್ರಯತ್ನಗಳೆಲ್ಲ ವ್ಯರ್ಥವಾಗಿದ್ದವು. ಯಾವುದಕ್ಕೆ ಈ ಪ್ರಯತ್ನ? ಹೀಗೆ ಕೇಳಿದರೆ... ಮೊಸರು.. ನಾನು ನಮ್ಮ ಭಾರತದಲ್ಲಿ ನಾವೆಲ್ಲ ಮನೆಯಲ್ಲೇ ಮೊಸರು ತಯರಿಸುತ್ತೀವಲ್ಲವೇ ಹಾಗೆಯೇ ಅಮೇರಿಕಾ ದೇಶದಲ್ಲೂ ನಾನು ವಾಸ ಮಾಡುವಾಗ ಮನೆಯಲ್ಲೇ ಮೊಸರು ಮಾಡಿ ತಿನ್ನಬೇಕೆಂಬ ಮಹದಾಸೆ ಇಂದ ಪಟ್ಟ ವ್ಯರ್ಥ ಪ್ರಯತ್ನಗಳವು.ಪ್ರಯತ್ನಗಳೆಲ್ಲ ಏಕೆ ವ್ಯರ್ಥವಾದವು? ಇದಕ್ಕೆ ಹಲವಾರು ಕಾರಣಗಳಿರಬಹುದು.. ಎಲ್ಲ ತರಹದ ಹಾಲಿನಿಂದ ಮೊಸರು ಮಾಡಲು ಸಾಧ್ಯವಿಲ್ಲ. ಹಾಗಾಗಿ ಉರೋಪಿನಲ್ಲಿ ಮಾದಬೆಕೆನ್ದೆನಿಸಿದರೂ ನಾನು ಪ್ರಯತ್ನ ಮಾಡಲೇ ಇಲ್ಲ.. ಅದೂ ಅಲ್ಲದೆ ಇಲ್ಲಿ ಒಬ್ಬ ಸ್ನೇಹಿತೆ ತಾನು ಮಡಿದ ಪ್ರಯತ್ನ ಸಫಲ ಆಗಲಿಲ್ಲ ಎಂದಾಗ ಮಾಡುವ ಧೈರ್ಯ ಬರಲಿಲ್ಲ. ಒಮ್ಮೆ ನನ್ನ ಗಂಡನ ಕಛೇರಿಯ ಸಹೋದ್ಯೋಗಿಯ ಮನೆಗೆ ಊಟಕ್ಕೆ ಹೋದಾಗ ಆಕೆ ತಾನು ಮನೆಯಲ್ಲೇ ಮೊಸರು ಮಾಡುತ್ತಿರುವುದಾಗಿ ಹೇಳಿದರು. ಹೇಗೆಂದು ಕೇಳಿ ನಾನು ಮಾಡಬೇಕೆಂದು ಯೋಜನೆ ಹಾಕಿದೆ. ಆಕೆ ಬಳಸಿದ ಹಾಲು ನಮ್ಮ ಮನೆಯಲ್ಲಿ ಇಲ್ಲದಿದ್ದರೂ ಅದೇ ವಿಧಾನದಲ್ಲಿ ಮನೆಯಲ್ಲಿ ಇದ್ದ ಕಡಿಮೆ ಪ್ರಮಾಣದ ಕೊಬ್ಬು ಉಳ್ಳ ಹಾಲಿನಿಂದಲೇ ಯತ್ನಿಸಿದೆ.. ಸರಿ ಒಂದು ರಾತ್ರಿ ಕಳೆಯಿತು. ಏನು ಪ್ರಯೋಜನವಾದಂತೆ ಕಾಣಿಸಲಿಲ್ಲ.. ಹೋಗಲಿ ಮತ್ತೊಂದು ದಿನ ತಡೆದು ನೋಡೋಣ ಏನು ಮನಸಾಯಿತು. ಕಾಡು ನೋಡಿದರೆ ಪ್ರಯತ್ನ ಸಫಲವಾಯಿತು.. ಹೇಗೆ ಎನ್ನುತ್ತೀರಾ? ಅದು ಮೊಸರಾಗುವ ವರೆಗೂ ಅದನ್ನು heater ಮೇಲೆಯೇ ಇರಿಸಿದರೆ ಆಗುತ್ತದೆ.. ಏಕೆಂದರೆ ಇಲ್ಲಿನ ತಾಪಮಾನ -೫ ಇಂದ -೧೦ ವರೆಗೂ ಇರುತ್ತದೆ.. ಒಟ್ಟಿನಲ್ಲಿ ನನಗೆ ಸಂತೋಷವಾಯಿತು.. ಛೆ ಛೆ ಇವಲೆನಪ್ಪ ಇದನ್ನೆಲ್ಲಾ ಬರೆಯುತ್ತಿದ್ದಾಳೆ ಇದರಲ್ಲೇನಿದೆ ಎಂದು ಯಾರಿಗಾದರೂ ಅನಿಸುವುದರಲ್ಲಿ ಆಶ್ಚರ್ಯ ಇಲ್ಲ !! ಆದರೆ ಬಹಳ ಜನರಿಗೆ ಮಾಡಲು ಸಾಧ್ಯವಾಗದ ಕೆಲಸ ನಾನು ಮಾಡಿದ್ದೇನೆ ಎನ್ನುವ ಸಮಾಧಾನ ನನಗಿದೆ..